Sunday 29 December 2013

ಎಮ್ಮನೆ ಅಚ್ಚೆಮನೆ 'ಗುಂಡುಬಾವಾ' ಒಂದು ಸಿಮ್ ಕಾರ್ಡ ತಂಗಂಬಲೇ ಪೋಟೋ ತೆಗಿಸ್ಕ್ಯಂಬ್ಲೆ,ಒಂದು ಪೋಟೋ ಸ್ಟುಡಿಯೋಕ್ಕೆ ಬಂದ್ನಡಾ. ಅಲ್ಲಿ ಪೋಟೋ ತೆಗಿಯವನ ಹತ್ರೆ "ಎಂಗೊಂದರೆಡು ಪಾಸಪೋರ್ಟ ಸೈಜಿಂದ ಪೋಟೋ ಹೊಡಕೊಡಕಾಗಿತ್ತಲಿ" ಅಂದ್ನಡಾ. ಆವಾಗ ಪೋಟೋ ಹೊಡೆಯವಾ "ಆತು ನೀವು ಆ ಕುರ್ಚಿ ಮೇಲೆ ಕುಂತ್ಗಳಿ"ಅಂದ್ನಡಾ. ಅವ ಕ್ಯಾಮರಾ ಸರಿ ಮಾಡ್ಕ್ಯತ್ತಾ ಇಪ್ಪಕಿರೆ, ಗುಂಡುಬಾವಂಗೆ ಹೊತ್ತೋಜಿಲ್ಲೆ! ಪೋಟೋ ಹೊಡೆಯವನ ಹತ್ರೆ ಮತ್ತೆ ಕೇಳ್ತ್ನಡಾ "ಅಲ್ಲಾ, ಈ ಪಾಸಪೋರ್ಟ ಸೈಜಿನ ಪೋಟೋದಲ್ಲಿ ಕಾಲಿಗೆಹಾಕಿದ್ದ 'ಚಪ್ಪಲ್ಲೂ' ಬತ್ತು ಅಲ್ದ?" ಆವಾಗ ಆ ಪೋಟೋ ಹೊಡೆಯವಾ ಅಂದನಡಾ "ಹ, ಬತ್ತು, ಬತ್ತು, ಆದರೆ 'ಚಪ್ಪಲಿ' ಕಾಲಿಂದ ತೆಗದು, ತಲೆಮ್ಯಾಲೆ ಇಟ್ಟ್ಕ್ಯಳಕಾಗತು' ಅಡ್ಡಿಲ್ಯ?"!

ಎಮ್ಮನೆ ಅಚ್ಚಮನೆ ಗುಂಡುಬಾವನ ಕುಟುಂಬವಾ ಈಗಿನ ಕಾಲದ "ವೆಬ್ ಸೈಟಗ"ಳ ಸಂತಿಗೆಯ ಹೀಂಗೆ ಹೋಲಿಸಲಕ್ಕು- ಗುಂಡುಬಾವನ ಹೆಂಡತಿ ಗೂಗಲ್ ಇದ್ದಾಂಗೆಯಾ! ಎಂಥಕ್ಕೆ ಅಂದರೆ ಇಡಿ ಊರಲ್ಲಿ ಆಗಿದ್ದು,ಅಪ್ಪದು ಮತ್ತು ಆಗದೇ ಹೋಗಿದ್ದ ಎಲ್ಲಾ ವಿಷಯವು ಇದಕ್ಕೆ ಗೊತ್ತಿರ್ತು.:-( ಗುಂಡುಬಾವನ 'ಮಗಾ' 'ಪೇಸ್ ಬುಕ್' ಇದ್ದಾಂಗೆಯಾ, ಎಂಥಕ್ಕೆ ಅಂದ್ರೆ ಮನೆಲಿ ನಡೆಯಾ ವಿಷಯವಾ ಇಡೀ ಊರಿಗೆ ಹೇಳ್ತಾ!B-) ಇನ್ನು ಗುಂಡುಬಾವನ ಮಗಳು ಇದು 'ಟ್ವಿಟರ್' ಇದ್ದಾಂಗೆ, ಎಂಥಕ್ಕೆ ಅಂದ್ರೆ ಇದನ್ನಾ ಇಡೀ ಊರವೇ ಪೊಲೋ(follow) ಮಾಡ್ತ.;-) ಇನ್ನು ಗುಂಡುಬಾವ 'ಒರ್ಕುಟ'(orkut)ಇದ್ದಾಂಗೆ, ಅವನ ಕೇಳವೇ ಯಾರು ಇಲ್ಲೆ!;->

ಗುಂಡುಬಾವನ 'ಕಿರಿಮಗ' ಅಂಗನವಾಡಿಗೆ ಹೋಪಕಿರೆ 'ಅಕ್ಕೋರು' ಎಂಥಾರು ಕಲ್ಸಲೇ ಶುರು ಮಾಡಿದ ಕೂಡ್ಲೆ "ಅಕ್ಕೋರೆ, ನಂಗೆ 'ಒಂದಕ್ಕೆ' ಬತ್ತು ಹೋಗಲ?" ಹೇಳಿ ಕೇಳ್ತಿದ್ನಡಾ! ಅಕ್ಕೋರು ಅದೇ ಊರವರೆಯಾ. ಹಾಂಗಾಗಿ 'ಅತ್ಗೆಕ್ಕ' ಎಲ್ಲಾ ಅಕ್ಕೋರ ಮಾತ ಆಡಿಸಲೆ ಬತ್ತಿದ್ವಡಾ. ಅವು ಬಂದಾಗಲೇ ಗುಂಡುಬಾವನ ಮಗ "ಅಕ್ಕೋರೆ, ಒಂದಕ್ಕಿ" ಹೇಳಿ ಕೇಳ್ತಿದ್ದಾ. ಹಾಂಗಾಗಿ ಅಕ್ಕೋರಿಗೆ ಬಂದೋರ ಎದುರಿಗೆ 'ಸುಮಾರು' ಆಗ್ತಿತ್ತಡಾ. ಹಾಂಗಾಗಿ ಒಂದಿನ ಗುಂಡುಬಾವನ ಕಿರಿಮಗನ ಕರೆದು "ತಮ್ಮಾ, ಎಲ್ಲವೂ ಬಂದಾಗ, 'ಒಂದಕ್ಕಿ ಬತ್ತು' ಹೇಳಿ ಹೇಳಡಾ. ನಿಂಗೆ ಅರ್ಜೆಂಟ್ ಆದರೆ ಅಕ್ಕೋರೆ, 'ಶಿಳ್ಳೆ ಹೊಡಿಲ' ಹೇಳಿ ಕೇಳು" ಅಂದ್ರಡಾ. ಅವನು "ಆತು ಅಕ್ಕೋರೆ" ಅಂದ್ನಡಾ. ಅವಂಗೆ 'ಅದು ಬಂದ' ಕೂಡಲೇ "ಅಕ್ಕೋರೆ, ಶಿಳ್ಳೆ ಹೊಡಿಲ?" ಕೇಳಿ ರೂಢಿ ಆಗೋತಡಾ. ಒಂದಿನ ಗುಂಡುಬಾವನ ಕಿರಿಮಗಂಗೆ ರಾತ್ರೆ ಮಲ್ಕ್ಯಂಡಾಗೆ ಒಂದಕ್ಕಿ ಬಂದೋತಡಾ! ಆವಾಗ ಗುಂಡುಬಾವನ್ನ ಎಬ್ಬಿಸ್ಕ್ಯಂಡು ಕೇಳಿದ್ನಡಾ "ಅಪ್ಪ, ಎಂಗೆ 'ಶಿಳ್ಳೆ' ಹೊಡೆಯವು!" ಆವಾಗ ಗುಂಡುಬಾವ "ಮಗಾ, ಈಗಾ ರಾತ್ರೆ ಆಗೋತು, ಇಗೆಲ್ಲಾ ಶಿಳ್ಳೆ ಹೊಡೆಯಲೆ ಆಗ" ಅದ್ನಡಾ. ಆವಾಗ ಮಗ "ಇಲ್ಲೇ, ನಂಗೆ ಶಿಳ್ಳೆ ಹೊಡಿಲೇ ಬೇಕು"ಅಂದ್ನಡಾ. ಆವಾಗ ಗುಂಡುಬಾವಾ ಅಂದ್ನಡಾ "ಮಗಾ, ದೊಡ್ಡಕೆ ಶಿಳ್ಳೆ ಹೊಡೆದರೆ ಎಲ್ಲವಕೂ ಕೇಳಿಸ್ತು, ಹಾಂಗಾಗಿ ಸಣ್ಣಕೆ ಎನ್ನ 'ಕಿವಿ' ಒಳಗೆ ಶಿಳ್ಳೆ ಹೊಡಿ!"

ಗುಂಡುಬಾವ ಮತ್ತೆ ಅವನ ಹೆಂಡತಿ 'ಡಿಸ್ಕೌಂಟ'ಲ್ಲಿ ಸೀರೆ ತಗಂಬಲೇ ಹೋಗಿದ್ವಡಾ. ಅಂಗಡಿಲಿ ಗುಂಡುಬಾವ ತನ್ನ ಹೆಂಡತಿಗೆ "ಯಾವದು ಬೇಕು ನೋಡಿ ಬೆಗ್ಗನೆ ತಗ" ಅಂದ್ನಡಾ. ಆವಾಗ ಅವನ ಹೆಂಡತಿ ಅಂಥಡಾ "ಯಾವದು ಹೇಳಿ ನೀವೇ ಆರಸಿ" ಆವಾಗ ಗುಂಡುಬಾವ ಸಿಟ್ಟ ಮಾಡ್ಕ್ಯಂಡು "ಎಂಥಾ ಮಾತಾಡ್ತೇ, ಸೀರೆ ಹಾಕ್ಯಂಬವಾ ನೀನ, ನಾನ? ಯಾವದು ಬೇಕು ಹೇಳಿ ಬೆಗ್ಗನೆ ತಗ" ಅಂದ್ನಡಾ. ಆವಾಗ ಅವನ ಹೆಂಡತಿ ಅಂತಡಾ "ಹಾಕ್ಯಂಬವಾ ಯಾನೆಯಾ ಆದರೆ ಅದನ್ನಾ 'ತೊಳಿಯವರು' ನೀವೆ ಅಲ್ದ? ಹಾಂಗಾಗಿ ಕೇಳ್ದೇ" :-):-D;-):-(:-|B-):-*

ಒಂದು ಕೂಸು ಬಸ್ಸಲ್ಲಿ ಕುತ್ಕಂಡು ಇತ್ತಡಾ. ಆವಾಗ ಅದರ ಹತ್ರೆ ಒಬ್ಬ ಮಾಣಿ ಅಂದ್ನಡಾ "ಪ್ರಿಯೆ, ನಿನ್ನ ಒಡೆದ ಹೃದಯದಿಂದ ಪ್ರೀತಿಸಲೇ, ಅಥವಾ ಹೃದಯ ಒಡೆದು ಚೂರಾವ ತನಕ ಪ್ರೀತಿಸಲೇ?" ಆವಾಗ ಮುಂದು ಕುಂತಿದ್ದ ಕೂಸಿನ್ನ ಅಮ್ಮ ಅಂತಡಾ "ತಮ್ಮಾ, ನಿಂಗೆ ಹರ್ಕ ಚಪ್ಪಲ್ ತಂಗಂಡು ಹೊಡೆಯವ? ಅಥವಾ ಚಪ್ಪಲ್ಲು ಹರಿಯ ತನಕ ಹೊಡೆಯವ?"

Tuesday 24 December 2013

''ಎಚ್ಚರಿಕೆ'' ಒಂದ್ ದಿನಾ ಒಬ್ಬ ಹುಡಗಂಗೆFACEBOOK ನಲ್ಲಿ ಸರ್ಚ್ ಮಾಡಕಿರೆ ಅವನ CLASSMATEಹುಡುಗಿ ­ ಯೊಂದರACCOUNT ಕಂಡತಡಾ, ಅವ ತಡ ಮಾಡದೆ ಒಂದು FREIND REQUESTಹಾಕೆಬಿಟ್ ನಡಾ . 1ತಾಸು ಬಿಟ್ಟು ಅವಂಗೆ''***Accpe ­ teted your freind request'' ಹೇಳಿNOTIPICATIO Nಬಂತಡಾ. ಆವತ್ ಸಂಜೆ ಇಂದಾನೆ ಅದರ ಸಂತಿಗೆ ಸಿಕ್ಕಾಪಟ್ಟೆCHAT ­ INGಮಾಡಲೆ ಶುರು ಮಾಡಿದ್ನಡಾ .ಅವನ ಎಲ್ಲಾ POST,PHOTO'Sಅದು LIKEಮಾಡತಿತ್ತಡ. ಹೀಂಗೆChatingಮಾಡ ್ತ ಒಂದ್ ತಿಂಗಳ ಒಳಗೆ ಸಿಕ್ಕಾಪಟ್ಟೆclos eಆದ್ವಡಾ . ಹೀಂಗೆ ಎಲ್ಲಾ ಹಗುರಾ ನಡಿತಾ ಇಪ್ಪಕಿರೆ ಆ ಕೂಸು ಅವಂಗೆCOLLAGE CAMPUSನಲ್ಲಿ ಒಂದ್ ದಿನಾ ಎದುರಿಗೆ ಕಂಡತಡಾ. ಅವ ಅದರನ್ನೆ ನೋಡತಾ ಸಣ್ಣಕೆ SMILEಕೊಟ್ಟನಡಾ,ಆ ದರೆ ಅದು ಕಂಡ್ರೂ ಕಾಣದಾಂಗೆ ಇವಾ ಗುರ್ತೆ ಇಲ್ಲೇ ಹೇಳಾ ರೀತಿ ನಡೆತ್ತಡಾ. ಹುಡಗಂಗೆ ಇದರ ನೋಡಿ ತಲೆ ಹಾಳ್ ಆದಾಂಗೆ ಆತಡಾ 'ತಾನುFACEBOOKನಲ ್ಲಿPROPOSEಮಾಡಿದ ಾಗ ಒಪ್ಪಕಂಡ್ ಕೂಸು ಇಲ್ ಎಂತಾ ಇ ನಮ್ನೆ ಮಾಡ್ತು ಹೇಳಿ ಅಂದ್ಕಂಡನಡಾ. ಮರುದಿನಾ ಅವ ಅದರನ್ನಾHOTELನಲ್ ಲಿ ಕಂಡನಡಾ, ಕಂಡವನೆ ಸೀದಾ ಅದರತ್ರೆ ಹೋಗಿ ತನ್ನ ಹೆಸರು ಹೇಳಿ 'ಎನ್ನ ಗುರತೆ ಸಿಕ್ಕಿದ್ದಿಲ್ಯ?' ಹೇಳಕೋತಾ ಅದಕ್ಕೆ ಸಂತಿಗೆ 'ಚಾ' ಕುಡಿಯಲೆ ಬಲವಂತ ಮಾಡಿದ್ನಡಾ ಆದರೆ ಆ ಕೂಸು ಅಳುತ್ತಾ ನಡೆತ್ತಡಾ. ಮರುದಿನಾ ಅದರ ಸಂಬದಿಕರು ಬಂದ ಹುಡುಗನ ಜೊತೆ ಜಗಳಕ್ಕೆ ನಿಂತವಡಾ.ಆಗ ವಿಷಯPRINCIPALEಬ ಳಿ ಹೋದಾಗ ಅವರು ತನಿಖೆ ಮಾಡಿಸಿದಾಗ ಕೆಲವು ಆಘಾತಕಾರಿ ವಿಷಯಗಳು ಬೆಳಕಿಗೆ ಬಂತು. "ಆ ಹುಡುಗಿFACEBOOKಅ ಥವಾ ಇನ್ಯಾವದೆSOCIAL NETWORK'S ACCOUNTಹೊಂದಿತ್ತ ಿಲ್ಲೆ, ಮತ್ತು ಅದರ ಹೆಸರಿನಲ್ಲಿ ಯಾರೋFAKE ACCOUNT ಮಾಡಿದಿದ್ವಡಾ, ಇ ವಿಷಯ ಗೊತ್ತಿಲ್ಲದ ಹುಡುಗ FAKE ACCOUNTಮಾಡಿದವರ ಜೊತೆಗೆ CHATING,LOVEಎಲ್ ಲಾ ಮಾಡಿ ಇದ್ದನಡಾ, ಇ ವಿಷಯ ತಿಳಿಯದ ಆ ಹುಡುಗಿ ಅವನನ್ನಾ NEGLECTಮಾಡಿತ್ತಡ ಾ". ಇ ಸುದ್ದಿ ಗೊತ್ತಾದ ಮೇಲೆ ಹುಡುಗ ಒಂದ್ಸರಿ SUCIDE ATEMPTಮಾಡಿದ್ನಡಾ , ಹುಡುಗಿCOLLAGE'ಗ ೆ ಬಪ್ಪದೇ ಬಿಟ್ತಡ.